ಅಚಲಪುರ

 ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯಲ್ಲಿನ ತಾಲ್ಲೂಕು ಕೇಂದ್ರ ಮತ್ತು ಮುಖ್ಯ ಪಟ್ಟಣವಾಗಿದ್ದು ಅಮರಾವತಿಯಿಂದ 48ಕಿ.ಮೀ. ದೂರದಲ್ಲಿದೆ.  ಜನಸಂಖ್ಯೆ 35,712 (1961); ವಿಸ್ತೀರ್ಣ 7 ಚ.ಕಿ.ಮೀ. ಸಮುದ್ರ ಮಟ್ಟಕ್ಕಿಂತ 1200` ಎತ್ತರದಲ್ಲಿರುವ ಇದರ ಸುತ್ತಮುತ್ತಲ ಪ್ರದೇಶ ಹತ್ತಿ ಬೆಳೆಗೆ ಪ್ರಾಮುಖ್ಯ ಪಡೆದಿದೆ.  ಹತ್ತಿ, ರೇಷ್ಮೆ ಮತ್ತು ಅರಣ್ಯ ಸಂಪತ್ತಿನ ಪ್ರಮುಖ ವ್ಯಾಪಾರಕೇಂದ್ರ.  ಐತಿಹಾಸಿಕ ಮಹತ್ವ ಪಡೆದಿದ್ದು.  1318ರಲ್ಲಿ ಹಿಂದೂಗಳಿಂದ ಮುಸಲ್ಮಾನರ ಅಧೀನಕ್ಕೆ ಹೋಯಿತು.  1869ರಲ್ಲಿ ಪೌರಸಭೆ ಸ್ಥಾಪಿಸಲ್ಪಟ್ಟಿತು.  ಸಾರಿಗೆ ಹೆದ್ದಾರಿಯ ಮೂಲಕ ಅಮರಾವತಿ ಮತ್ತು ಚಿಕಲಡಗಳಿಗೆ ಸಂಬಂಧ ಹೊಂದಿದೆ.

(ಪಿ.ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ